ignis fatuus ಇಗ್ನಿಸ್‍ ಹ್ಯಾಟ್ಯುಅಸ್‍
ನಾಮವಾಚಕ
(ಬಹುವಚನ ignes fatui ಉಚ್ಚಾರಣೆ ಇಗ್ನೀಸ್‍ ಹ್ಯಾಟ್ಯುಇ).
  1. ಕೊಳ್ಳಿದೆವ್ವ; ಕೊಳ್ಳಿಪಿಶಾಚಿ; ಜವುಗು ನೆಲದಲ್ಲಿ ಕೊಳೆಯುತ್ತಿರುವ ಜೈವಿಕ ಪದಾರ್ಥದಿಂದ ಹೊರಟ ಅನಿಲ ತಾನಾಗಿ ಹೊತ್ತಿಕೊಳ್ಳುವುದರಿಂದ ಒಮ್ಮೊಮ್ಮೆ ಕಾಣಿಸಿಕೊಳ್ಳುವ ಉರಿ, ಜ್ವಾಲೆ.
  2. ಭ್ರಾಂತಿ; (ಲಾಭದ) ಭ್ರಮೆ; ಹುಸಿ ಆಸೆ: the ignis fatuus of a world without wars ಯುದ್ಧಗಳಿಲ್ಲದ ಪ್ರಪಂಚದ ಹುಸಿ ಆಸೆ.